ಬೇಕಾಗುವ ಪದಾರ್ಥಗಳು:
ಬಾಂಬೆ ರವೆ-250 ಗ್ರಾಂ,
ಸಕ್ಕರೆ-250 ಗ್ರಾಂ,
ತುಪ್ಪ-ದ್ರಾಕ್ಷಿ,
ಗೋಡಂಬಿ ಹುರಿಯಲು ಬೇಕಾಗುವಷ್ಟು,
ಕೊಬ್ಬರಿ ತುರಿ-50ಗ್ರಾಂ,
ಒಣದ್ರಾಕ್ಷಿ-10,
ಗೋಡಂಬಿ-10
ಕಾಯಿಸಿದ ಹಾಲು-1 ಲೋಟ
ಮಾಡುವ ವಿದಾನ:
ಮೊದಲು ರವೆಯನ್ನು ಬೆರಳಿನಲ್ಲಿ ಮುಟ್ಟಿದರೆ ಸುಡುವಷ್ಟು ಹದಕ್ಕೆ ಹುರಿದುಕೊಳ್ಳಬೇಕು. ನಂತರ ಒಣದ್ರಾಕ್ಷಿ , ಗೋಡಂಬಿ ಮತ್ತು ಏಲಕ್ಕಿಯನ್ನು ತುಪ್ಪದಲ್ಲಿ ಹದವಾಗಿ ಹುರಿದುಕೊಂಡು. ಸಕ್ಕರೆಯನ್ನು ಒಂದೆಳೆ ಪಾಕ ಮಾಡಿಕೊಳ್ಳಬೇಕು, ಪಾಕಕ್ಕೆ ತುರಿದ ಕೊಬ್ಬರಿ, ದ್ರಾಕ್ಷಿ, ಗೋಡಂಬಿ ಜೊತೆಗೆ ಮೊದಲೇ ಹುರಿದುಕೊಂಡಿರುವ ರವೆಯಲ್ಲಿ ಚೆನ್ನಾಗಿ ಬೆರಸಿ, ನಂತರ ಉಂಡೆ ಕಟ್ಟಲು ಬೇಕಾದ ಹದಕ್ಕೆ ಕಾಯಿಸಿದ ಹಾಲನ್ನು ಸ್ವಲ್ಪ, ಸ್ವಲ್ಪವಾಗಿ ಹಾಕಿಕೊಂಡು ಉಂಡೆಯನ್ನು ಕಟ್ಟಿ ಮತ್ತೊಂದು ಪಾತ್ರೆಯಲ್ಲಿ ಹಾಕಬೇಕು. ಈಗ ರವೆ ಲಡ್ಡು ಸವಿಯಲು ಸಿದ್ದ.