image image
ಬ್ರೇಕಿಂಗ್ ನ್ಯೂಸ್
ಬ್ರೇಕಿಂಗ್ ನ್ಯೂಸ್
ಅಡುಗೆ

ಪತೋಲಿ

ಪತೋಲಿ

ಬೇಕಾಗುವ ಸಾಮಗ್ರಿಗಳು:
ಅಕ್ಕಿ- ೨೫೦ ಗ್ರಾಂ
ಅರಿಶಿನದ ಎಲೆ- ೧೦ ರಿಂದ ೧೫
ಬೆಲ್ಲ-೨೫೦ ಗ್ರಾಂ
ತೆAಗಿನ ಕಾಯಿ ತುರಿ-೧ಕಪ್
ಉಪ್ಪು- ರುಚಿಗೆ ತಕ್ಕಷ್ಟು,
ಏಲಕ್ಕಿ- ಸ್ವಲ್ಪ
ಮಾಡುವ ವಿಧಾನ
ಮೊದಲಿಗೆ ಅಕ್ಕಿಯನ್ನು ಸುಮಾರು ನಾಲ್ಕರಿಂದ ಐದು ತಾಸು ನೀರಿನಲ್ಲಿ ನೆನೆಸಿಟ್ಟು, ನಂತರ ಅಕ್ಕಿಗೆ ರುಚಿಗೆ ತಕ್ಕಷ್ಟು ಉಪ್ಪು ಸೇರಿಸಿ ನುಣ್ಣಗೆ ಗಟ್ಟಿಯಾಗಿ ರುಬ್ಬಿಕೊಳ್ಳಬೇಕು. ನಂತರ ಅರಿಶಿನದ ಎಲೆಗಳನ್ನು ಎರಡೂ ಕಡೆ ಚೆನ್ನಾಗಿ ತೊಳೆದು ಶುಚಿಗೊಳಿಸಿಕೊಂಡು ಎಲೆಯ ತುದಿಯನ್ನು ಕತ್ತರಿಸಿಕೊಳ್ಳಬೇಕು. ನಂತರ ಬೆಲ್ಲವನ್ನು ಚೆನ್ನಾಗಿ ಪುಡಿಮಾಡಿ ಅದಕ್ಕೆ ತೆಂಗಿನ ಕಾಯಿಯ ಜೊತೆಗೆ ಏಲಕ್ಕಿ ಪುಡಿಯನ್ನು ಮಿಶ್ರಣ ಮಾಡಿ ಕಲಸಿಕೊಳ್ಳಬೇಕು, ನೀರಿನ ಅವಶ್ಯಕತೆ ಇರುವುದಿಲ್ಲ. ಈಗ ಇಡ್ಲಿ ಮಾಡುವ ಪಾತ್ರೆಗೆ ನೀರು ಹಾಕಿ ಹಬೆ ಆರಂಭವಾಗುತ್ತಿದ್ದAತೆ ರುಬ್ಬಿದ ಮಿಶ್ರಣವನ್ನು ಎಲೆಗಳಿಗೆ ಹಚ್ಚಬೇಕು, ಹಚ್ಚಿದಾಗ ಸೋರುವ ಹಾಗಿರಬಾರದು ಈಗ ಹಿಟ್ಟಿನ ಮೇಲೆ ಕಾಯಿಬೆಲ್ಲ ಕಾಯಿ ಎಲೆಗಳನ್ನು ಮಡಚಿ ಹಬೆ ಆಡುವ ಪಾತ್ರೆಯಲ್ಲಿ ಇಟ್ಟು ೩೦ ನಿಮಿಷ ಬೇಯಿಸಿದರೆ ರುಚಿಕರವಾದ ಮತ್ತು ಆರೋಗ್ಯಕರವಾದ ಪತೋಲಿ ಸವಿಯಲು ಸಿದ್ದ.

Category
ಕರಾವಳಿ ತರಂಗಿಣಿ