image image
ಬ್ರೇಕಿಂಗ್ ನ್ಯೂಸ್
ಬ್ರೇಕಿಂಗ್ ನ್ಯೂಸ್
ಅಡುಗೆ

ರುಚಿಕರವಾದ ಬದನೆಕಾಯಿ ಎಣ್ಣೆಗಾಯಿ ಮಾಡುವ ವಿಧಾನ......

ರುಚಿಕರವಾದ ಬದನೆಕಾಯಿ ಎಣ್ಣೆಗಾಯಿ ಮಾಡುವ ವಿಧಾನ......

ಬೇಕಾಗುವ ಪದಾರ್ಥಗಳು:

ಸಣ್ಣ ಎಳೆ ಬದನೆಕಾಯಿ -5-6

ಈರುಳ್ಳಿ - 1

ಹುಣಸೆ ಹಣ್ಣು - ಸ್ವಲ್ಪ

ಕರಿಬೇವಿನ ಸೊಪ್ಪು - 4-5

ಕೊತ್ತಂಬರಿ ಸೊಪ್ಪು - ಸ್ವಲ್ಪ

ಸಾಸಿವೆ - 1/4 ಚಮಚ

ತೆಂಗಿನ ಎಣ್ಣೆ - 4 ಚಮಚ

ಉಪ್ಪು - ರುಚಿಗೆ ತಕ್ಕಷ್ಟು

ಮಸಾಲೆಗೆ ಬೇಕಾಗುವ ಪದಾರ್ಥಗಳು:

ಎಳ್ಳು - 2 ಚಮಚ

ನೆಲಗಡಲೆ - 2 ಚಮಚ

ಒಣ ಮೆಣಸಿನಕಾಯಿ - 3-6

ದನಿಯಾ - 2 ಚಮಚ

ಜೀರಿಗೆ - 1 ಚಮಚ

ಕಡಲೆಬೇಳೆ - 2 ಚಮಚ

ಉದ್ದಿನ ಬೇಳೆ - 1 ಚಮಚ

ಮೆಂತ್ಯ - 1/4 ಚಮಚ

ಹುರಿಗಡಲೆ - 2 ಚಮಚ

ತೆಂಗಿನ ತುರಿ - 1/2 ಕಪ್

ಮಾಡುವ ವಿಧಾನ:

ಮೊದಲಿಗೆ ಬದನೇಕಾಯಿಯನ್ನು ತೊಳೆದು+ ಆಕಾರದಲ್ಲಿ ಸೀಳಬೇಕು. ಸೀಳಿದ ಬದನೆಕಾಯಿಯನ್ನು ಉಪ್ಪು ನೀರಿನಲ್ಲಿ ಸ್ವಲ್ಪ ಹೊತ್ತು ನೆನೆಸಿಡಬೇಕು. ನಂತರ ಒಂದು ಬಾಣಲೆಯಲ್ಲಿ ಎಣ್ಣೆ ಹಾಕದೆ ಮೊದಲಿಗೆ ಎಳ್ಳು, ನೆಲಗಡಲೆಯ ಹುರಿದು ತೆಗೆದಿಟ್ಟುಕೊಳ್ಳಬೇಕು. ನಂತರ ಒಂದು ಚಮಚ ಎಣ್ಣೆ ಹಾಕಿ ಮೆಣಸಿನಕಾಯಿ, ದನಿಯಾ, ಜೀರಿಗೆ, ಕಡಲೆಬೇಳೆ, ಉದ್ದಿನ ಬೇಳೆ ಮತ್ತು ಮೆಂತ್ಯವನ್ನು ಮಧ್ಯಮ ಉರಿಯಲ್ಲಿ ಕಂದು ಬಣ್ಣಕ್ಕೆ ಬರುವವರೆಗೆ ಹುರಿದು ತಣ್ಣಗಾದ ಮೇಲೆ ತೆಂಗಿನ ತುರಿ ಹಾಕಿ ಸ್ವಲ್ಪ ನೀರು ಸೇರಿಸಿ ಗಟ್ಟಿಯಾಗಿ ರುಬ್ಬಬೇಕು. ನಂತರ ಅದೇ ಬಾಣಲೆಗೆ ಉಳಿದ ಎಣ್ಣೆ ಹಾಕಿ ಸಾಸಿವೆ ಮತ್ತು ಕರಿಬೇವಿನ ಒಗ್ಗರಣೆ ಮಾಡಿ. ಕತ್ತರಿಸಿದ ಈರುಳ್ಳಿ ಹಾಕಿ ಬಾಡಿಸಿ. ಅರಶಿನ ಪುಡಿ ಸೇರಿಸಿ. ಈಗ ಬದನೆಕಾಯಿಯೊಳಗೆ ಅರೆದ ಮಸಾಲೆ ತುಂಬಿಸಿ, ಬಾಣಲೆಯಲ್ಲಿ ಒಗ್ಗರಣೆಯಿಟ್ಟು ನೀರು ಹಾಕದೆ ಬೇಯಿಸಿ. ಆಗಾಗ ಬದನೆಕಾಯಿಯನ್ನು ತಿರುವುತ್ತಾ ಇರಬೇಕು. ಬದನೇಕಾಯಿಸ್ವಲ್ಪ ಮೆತ್ತಗಾದ ಕೂಡಲೇ ಉಪ್ಪು ಮತ್ತು ಹುಣಿಸೆರಸ ಸೇರಿಸಿ ಬೇಯಿಸುವುದನ್ನು ಮುಂದುವರೆಸಿ. ಬದನೇಕಾಯಿ ಸಂಪೂರ್ಣ ಮೆತ್ತಗಾದ ಮೇಲೆ ಉಳಿದ ಮಸಾಲೆ ಮತ್ತು 1 ಕಪ್ ನೀರು ಸೇರಿಸಿ. ಒಮ್ಮೆ ಮಗುಚಿ, ಮುಚ್ಚಳ ಮುಚ್ಚಿ 5 ನಿಮಿಷಗಳ ಕಾಲ ಬೇಯಿಸಿ. ಕೊನೆಯಲ್ಲಿ ಹೆಚ್ಚಿದ ಕೊತ್ತಂಬರಿ ಸೊಪ್ಪು ಹಾಕಿದರೆ ರುಚಿಕರವಾದ ಬದನೆಕಾಯಿ ಎಣ್ಣೆಗಾಯಿ ಸವಿಯಲು ಸಿದ್ದ.

✍ ಲಲಿತಶ್ರೀ ಪ್ರೀತಂ ರೈ

Category
ಕರಾವಳಿ ತರಂಗಿಣಿ