image image
ಬ್ರೇಕಿಂಗ್ ನ್ಯೂಸ್
ಬ್ರೇಕಿಂಗ್ ನ್ಯೂಸ್
ಅಡುಗೆ

ಲಿಂಬೆ ಹಣ್ಣಿನ ಗೊಜ್ಜು....

ಲಿಂಬೆ ಹಣ್ಣಿನ ಗೊಜ್ಜು....

ಬೇಕಾಗುವ ಸಾಮಾಗ್ರಿಗಳು

ಲಿಂಬೆ ಹಣ್ಣು-8

ಬ್ಯಾಡಗಿ ಮೆಣಸು 20-25

ಕೊಬ್ಬರಿ ತುರಿ-ಅರ್ದ ಬಟ್ಟಲು

ಮೆಂತ್ಯ – 1 ಚಮಚ

ಎಣ್ಣೆ - 5-6 ಚಮಚ

ಒಗ್ಗರಣೆಗೆ ಸಾಸಿವೆ, ಇಂಗು, ಕರಿಬೇವು, 

ಮಾಡುವ ವಿಧಾನ:-

ಬ್ಯಾಡಗಿ ಮೆಣಸಿನಕಾಯಿನ್ನು ಸ್ವಲ್ಪ ಎಣ್ಣೆಯಲ್ಲಿ ಹುರಿದಿಟ್ಟುಕೊಂಡು,  ಒಂದು ಟಿ ಚಮಚ ಮೆಂತ್ಯವನ್ನು ಹುರಿದು ಆರಿದಮೇಲೆ  ಮೆಣಸಿನಕಾಯಿ ಜೊತೆ ಸೇರಿಸಿ ಪುಡಿ ಮಾಡಬೇಕು. ನಿಂಬೆಹಣ್ಣು ರಸ ಹಿಂಡಿ ಬೀಜ ಸೋಸಿ ಇಡಬೇಕು. ಒಣ ಕೊಬ್ಬರಿಯನ್ನು ತುರಿದುಕೊಂಡು ನಂತರ ಕೊಬ್ಬರಿ ತುರಿ, ಮೆಣಸಿನಕಾಯಿ, ಮೆಂತ್ಯದ ಪುಡಿ, ಸ್ವಲ್ಪ ನೀರು ಸೇರಿಸಿ ನುಣ್ಣಗೆ ರುಬ್ಬಿ. ಬಾಣಲೆಯಲ್ಲಿ ನಾಲ್ಕು ಚಮಚ ಎಣ್ಣೆ ಹಾಕಿ, ಸಾಸಿವೆ, ಇಂಗು, ಕರಿಬೇವು ಹಾಕಿ ಒಗ್ಗರಣೆ ಸಿದ್ದ ಮಾಡಿ, ರುಬ್ಬಿದ ಮಸಾಲೆ, ರುಚಿಗೆ ತಕ್ಕಷ್ಟು ಉಪ್ಪು,  ಹಾಕಿ ಚೆನ್ನಾಗಿ ಕಲಸಬೇಕು,  ಎಣ್ಣೆ ಅಂಶ ಮೇಲೆ ಬರುವವರೆಗೆ ಕುದಿಸಿ ಕೊನೆಯಲ್ಲಿ ನಿಂಬೆ ರಸ ಸೇರಿಸಿ ಚೆನ್ನಾಗಿ ಕಲಸಿ ಒಂದು ಕುದಿ ಬಂದ ತಕ್ಷಣ ಒಲೆಯಿಂದ ಇಳಿಸಿದರೆ ಅರೋಗ್ಯಕರವಾದ ಮತ್ತು ರುಚಿಯಾದ ಸವಿಯಲು ಸಿದ್ದ. 

✍ಲಲಿತಶ್ರೀ ಪ್ರೀತಂ ರೈ

Category
ಕರಾವಳಿ ತರಂಗಿಣಿ