image image
ಬ್ರೇಕಿಂಗ್ ನ್ಯೂಸ್
ಬ್ರೇಕಿಂಗ್ ನ್ಯೂಸ್
ಅಡುಗೆ

ಬಾಯಲ್ಲಿ ನೀರೂರಿಸುವ ಚಿಕನ್ ಚೆಟ್ಟಿನಾಡ್ ಮಾಡುವ ಸುಲಭ ವಿಧಾನ

ಬಾಯಲ್ಲಿ ನೀರೂರಿಸುವ ಚಿಕನ್ ಚೆಟ್ಟಿನಾಡ್ ಮಾಡುವ ಸುಲಭ ವಿಧಾನ

ಬೇಕಾಗುವ ಸಾಮಾಗ್ರಿಗಳು:

ಚಿಕನ್- ಅರ್ಧ ಕೆಜಿ

ಶುಂಠಿ ಹಾಗೂ ಬೆಳ್ಳುಳ್ಳಿ ಪೇಸ್ಟ್ -2 ಚಮಚ

ಹಸಿ ಮೆಣಸಿನಕಾಯಿ- 5-6

ಈರುಳ್ಳಿ- 1

ಟೊಮೆಟೊ- 2

ಚಕ್ಕೆ- 1 ಇಂಚು

ಲವoಗ- 4 

ಕೊತ್ತಂಬರಿ ಪುಡಿ-1 ಚಮಚ

ಖಾರದ ಪುಡಿ -1 ಚಮಚ

ಜೀರಿಗೆ 1 ಚಮಚ

ಏಲಕ್ಕಿ 2

ಕರಿಮೆಣಸು -2-3

ಸಾಸಿವೆ-1 ಚಮಚ

ರುಚಿಗೆ ತಕ್ಕ ಉಪ್ಪು

ಎಣ್ಣೆ- 2 ಚಮಚ

ಕರಿ ಬೇವು-ಸ್ವಲ್ಪ

ಮಾಡುವ ವಿಧಾನ:

ಮೊದಲಿಗೆ ಒಂದು ಬಾಣಲೆಗೆ ಎಣ್ಣೆ ಹಾಕಿ ಬಿಸಿ ಮಾಡಬೇಕು, ನಂತರ ಸಾಸಿವೆ, ಜೀರಿಗೆ ಹಾಕಿ ನಂತರ ಚಕ್ಕೆ, ಏಲಕ್ಕಿ, ಲವಂಗ ಹಾಕಿ, ಕರಿ ಬೇವಿನ ಎಲೆ ಹಾಕಿ ಉರಿಯಬೇಕು ನಂತರ ಶುಂಠಿ-ಬೆಳ್ಳುಳ್ಳಿ ಪೇಸ್ಟ್ ಮತ್ತು ಕತ್ತರಿಸಿದ ಈರುಳ್ಳಿ ಹಾಕಿ ಸ್ವಲ್ಪ ಹೊತ್ತು ಹುರಿಯಬೇಕು, ನಂತರ ಹಸಿ ಮೆಣಸಿನಕಾಯಿ ಹಾಗೂ ಟೊಮೆಟೋ ಹಾಕಿ ಚೆನ್ನಾಗಿ ಉರಿಯಬೇಕು. ನಂತರ ಚಿಕನ್ ಹಾಕಿ ಚೆನ್ನಾಗಿ ಮಿಶ್ರ ಮಾಡಿ, ಅರಿಶಿಣ ಹಾಗೂ ಖಾರದ ಪುಡಿ, ಕೊತ್ತಂಬರಿ ಪುಡಿ ಹಾಕಿ, ರುಚಿಗೆ ತಕ್ಕ ಉಪ್ಪು ಹಾಕಿ ಮಂದ ಉರಿಯಲ್ಲಿ ಬೇಯಿಸಬೇಕು. ಚಿಕನ್ ಚೆನ್ನಾಗಿ ಬೆಂದ ಮೇಲೆ ಅದಕ್ಕೆ ಕರಿ ಮೆಣಸಿನ ಪುಡಿ ಉದುರಿಸಿದರೆ ರುಚಿಯಾದ ಚಿಕನ್ ಚೆಟ್ಟಿನಾಡು ಸವಿಯಲು ಸಿದ್ದ.

✍ಲಲಿತಶ್ರೀ ಪ್ರೀತಂ ರೈ

Category
ಕರಾವಳಿ ತರಂಗಿಣಿ