ಬೇಕಾಗುವ ಸಾಮಾಗ್ರಿಗಳು:1-ಕೆಜಿ ಚಿಕನ್, 2 -ಚಮಚ ದನಿಯಾ, 1/2- ಚಮಚ ಮೆಂತೆ, ಚಿಟಿಕೆಯಷ್ಟು ಅರಿಶಿಣ ಪುಡಿ, 1 -ಚಮಚ ಕರಿಮೆಣಸು, 1- ಚಮಚ ಜೀರಿಗೆ,1 -ಚಮಚ ಗಸೆಗಸೆ 5- ಬೆಳ್ಳುಳ್ಳಿ ಎಸಳು, ಹುರಿದ ಬ್ಯಾಡಗಿ ಮೆಣಸಿನ ಕಾಯಿ -10, ತುರಿದ ತೆಂಗಿನ ಕಾಯಿ ಒಂದು ಕಪ್, ಸ್ವಲ್ಪ ಕರಿ ಬೇವಿನ ಎಲೆ, ಈರುಳ್ಳಿ- 2, ತುಪ್ಪ ಚಮಚ, ಉಪ್ಪು ರುಚಿಗೆ ತಕ್ಕಷ್ಟು.
ಮಾಡುವ ವಿದಾನ: ಮೊದಲಿಗೆ ಬಾಣಲೆಯಲ್ಲಿ ತುಪ್ಪ ಹಾಕಿ ಬಿಸಿ ಮಾಡಿ ಅದರಲ್ಲಿ ಕರಿಮೆಣಸು, ಮೆಂತೆ, ಕೊತ್ತಂಬರಿ ಬೀಜ, ಗಸೆಗಸೆ, ಜೀರಿಗೆ, ಹಾಕಿ ಹುರಿದು ತಣ್ಣಗಾದ ನಂತರ ಮೆಣಸಿನ ಕಾಯಿ ಮತ್ತು ಅರಿಶಿಣ ಹಾಕಿ ಪುಡಿ ಮಾಡಬೇಕು.
ನಂತರ ಈ ಪುಡಿಯನ್ನು ಚಿಕನ್ ಜೊತೆ ಮಿಶ್ರ ಮಾಡಿ ರುಚಿಗೆ ತಕ್ಕ ಉಪ್ಪು ಹಾಕಿ ಕಡಿಮೆ ಉರಿಯಲ್ಲಿ 10 ನಿಮಿಷ ಬೇಯಿಸಿ ನಂತರ ತೆಂಗಿನ ಕಾಯಿ ತುರಿ ಹಾಕಿ, ಪಾತ್ರೆಯ ಬಾಯಿ ಮುಚ್ಚಿ ಮತ್ತೆ 4-5 ನಿಮಿಷ ಚಿಕನ್ನ್ನು ಬೇಯಿಸಬೇಕು. ಈಗ ಬಾಣಲೆಯನ್ನು ಬಿಸಿ ಮಾಡಿ ಅದಕ್ಕೆ ತುಪ್ಪ ಹಾಕಿ ಅದರಲ್ಲಿ ಕರಿಬೇವಿನ ಎಲೆ ಮತ್ತು ಕತ್ತರಿಸಿದ ಈರುಳ್ಳಿ ಹಾಕಿ, ಈರುಳ್ಳಿ ಕಂದು ಬಣ್ಣಕ್ಕೆ ಬರುವವರೆಗೆ ಹುರಿದು ಅದಕ್ಕೆ ತಯಾರಿಸಿಟ್ಟ ಚಿಕನ್ ಜೊತೆ ಹಾಕಿ ಮಿಶ್ರ ಮಾಡಿದರೆ ರುಚಿಕರವಾದ ಚಿಕನ್ ಸುಕ್ಕ ಸವಿಯಲು ಸಿದ್ದ