ಮೈದಾ ಹಿಟ್ಟು- 1 ಕಪ್
ಚಿರೋಟಿ ರವೆ -1/4 ಕಪ್
ಉಪ್ಪು- ಚಿಟಿಕೆ
ಬೆಲ್ಲ- 1 ಅಚ್ಚು
ಕೊಬ್ಬರಿ ತುರಿ- 1 ಕಪ್
ಏಲಕ್ಕಿ ಪುಡಿ-ಚಿಟಿಕೆ
ಗಸಗಸೆ- 1 ಚಮಚ
ಎಳ್ಳು - ಸ್ವಲ್ಪ
ಗೋಡಂಬಿ - 10
ಬಾದಾಮಿ - 5-6 ಎಣ್ಣೆ ಕರಿಯಲು ಬೇಕಾಗುವಷ್ಟು.
ಮಾಡುವ ವಿಧಾನ:
ಮೊದಲಿಗೆ ಒಂದು ಬಟ್ಟಲಿಗೆ ಚಿರೋಟಿ ರವೆ, ಮೈದಾ ಹಿಟ್ಟು, ಉಪ್ಪು ಸೇರಿಸಿ ಚಪಾತಿ ಹಿಟ್ಟಿನ ಹದಕ್ಕೆ ಕಲಸಿಕೊಂಡು ತಟ್ಟೆ ಮುಚ್ಚಿಡಿ. ನಂತರ ಒಂದು ಪ್ಯಾನ್ ಅನ್ನು ಒಲೆಯ ಮೇಲಿಟ್ಟು ಅದಕ್ಕೆ ಸೋಸಿಕೊಂಡ ಬೆಲ್ಲದ ನೀರು, ಕೊಬ್ಬರಿ ತುರಿಯನ್ನು ಹಾಕಿ ಫ್ರೈ ಮಾಡಬೇಕು. ಹೂರಣ ಸ್ವಲ್ಪ ಗಟ್ಟಿಯಾದಂತೆ ಅದಕ್ಕೆ ಏಲಕ್ಕಿ ಪುಡಿ, ಹುರಿದ ಗಸಗಸೆ, ಪುಡಿ ಮಾಡಿದ ಎಳ್ಳು, ಹುರಿದು ಸಣ್ಣಗೆ ಹೆಚ್ಚಿದ ಗೋಡಂಬಿ, ಬಾದಾಮಿ ಸೇರಿಸಿ ಮಿಕ್ಸ್ ಮಾಡಿ ತಣ್ಣಗಾಗಲು ಬಿಡಬೇಕು. ಈಗ ಹಿಟ್ಟನ್ನು ತೆಗೆದುಕೊಂಡು ಪೂರಿ ಆಕಾರಕ್ಕಿಂತ ಸ್ವಲ್ಪ ಕಡಿಮೆ ಲಟ್ಟಿಸಿ ಅದರೊಳಗೆ ೧/೨ ಚಮಚ ಹೂರಣ ಸೇರಿಸಿ ಬೆಳ್ಳುಳ್ಳಿ ಆಕಾರಕ್ಕೆ ಮಧ್ಯಕ್ಕೆ ಮಡಚಬೇಕು. ಆಮೇಲೆ ಈ ಮೋದಕಗಳನ್ನು ಕಾದ ಎಣ್ಣೆಯಲ್ಲಿ ಹಾಕಿ ಕರಿದರೆ ಗಣಪನಿಗೆ ಪ್ರೀಯವಾದ ರುಚಿಕರವಾದ ಮೋದಕ ಸವಿಯಲು ಸಿದ್ದ.