ಬೇಕಾಗುವ ಪದಾರ್ಥಗಳು
ನುಗ್ಗೆ ಸೊಪ್ಪು - 1 ಬಟ್ಟಲು
ಕೆಂಪು ಮೆಣಸಿನಕಾಯಿ - 5
ಕರಿ ಮೆಣಸು - 4
ಜೀರಿಗೆ - 1 ಚಮಚ
ಹುಣಸೆಹಣ್ಣು - ಸಣ್ಣ ಉಂಡೆಯಷ್ಟು
ತೆAಗಿನಕಾಯಿ ತುರಿ - ಅರ್ಧ ಬಟ್ಟಲು
ಎಣ್ಣೆ- 1-2 ಚಮಚ
ಉಪ್ಪು-ರುಚಿಗೆ ತಕ್ಕಷ್ಟು
ತಯಾರಿಸುವ ವಿಧಾನ
ಒಂದು ಪಾತ್ರೆಯಲ್ಲಿ 1 ಚಮಚ ಎಣ್ಣೆ ಹಾಕಿ ಬಿಸಿಯಾದ ಮೇಲೆ ಮೆಣಸಿನಕಾಯಿ, ಕರಿ ಮೆಣಸು, ಜೀರಿಗೆ, ನುಗ್ಗೆ ಸೊಪ್ಪು ಹಾಕಿ ಹುರಿಯಿರಿ. ತಣ್ಣಗಾದ ನಂತರ ಇದಕ್ಕೆ ಉಪ್ಪು, ಹುಣಸೆಹಣ್ಣು, ತೆಂಗಿನಕಾಯಿ ತುರಿ ಬೆರೆಸಿ, ಸ್ವಲ್ಪವೇ ನೀರು ಹಾಕಿ ಚೆನ್ನಾಗಿ ರುಬ್ಬಿಕೊಂಡರೆ ರುಚಿಯಾದ ಮತ್ತು ಆರೋಗ್ಯಕರವಾದ ಚಟ್ನಿ ಸವಿಯಲು ಸಿದ್ದ.