ಬೇಕಾಗುವ ಸಾಮಗ್ರಿಗಳು:
ಗೋಡಂಬಿ-ಕಾಲು ಕಪ್,
ಹಸಿ ಖರ್ಜೂರ-ಅರ್ಧ ಕೆ.ಜಿ,
ಬಾದಾಮಿ-ಕಾಲು ಕಪ್,
ಪಿಸ್ತಾ-ಕಾಲು ಕಪ್,
ತುಪ್ಪ-2 ಟೇಬಲ್ ಸ್ಪೂನ್,
ಗಸಗಸೆ-1 ಟೇಬಲ್ ಸ್ಪೂನ್,
ಏಲಕ್ಕಿ ಪುಡಿ-1 ಟೀ ಸ್ಪೂನ್,
ಜಾಕಾಯಿ ಪುಡಿ-ಅರ್ಧ ಟೀ ಸ್ಪೂನ್.
ಲಡ್ಡು ಮಾಡುವ ವಿಧಾನ: ಖರ್ಜೂರವನ್ನು ಮಿಕ್ಸಿ ಜಾರ್‌ಗೆ ಹಾಕಿ ತರಿತರಿಯಾಗಿ ಪುಡಿ ಮಾಡಿ ಒಂದು ಬಟ್ಟಲಿಗೆ ಹಾಕಿ. ನಂತರ ಗೋಡಂಬಿ, ಗಸಗಸೆ, ಬಾದಾಮಿ, ಪಿಸ್ತಾವನ್ನು ತರಿತರಿಯಾಗಿ ಪುಡಿ ಮಾಡಿಕೊಳ್ಳಬೇಕು. ಒಂದು ಬಾಣಲೆಗೆ ತುಪ್ಪ ಹಾಕಿ ಒಣ ಹಣ್ಣುಗಳನ್ನು ಹಾಕಿ ಹೊಂಬಣ್ಣ ಬರುವವರೆಗೆ ಹುರಿದು, ನಂತರ ಇದಕ್ಕೆ ಖರ್ಜೂರದ ತುಂಡುಗಳನ್ನು ಹಾಕಿ ಬಿಸಿ ಆಗುವವರೆಗೆ ತಿರುವಿ. ಇವೆಲ್ಲವನ್ನು ಒಂದು ತಟ್ಟೆಗೆ ಹಾಕಿ, ಇದಕ್ಕೆ ಏಲಕ್ಕಿ, ಜಾಕಾಯಿ ಪುಡಿ ಹಾಕಿ ಮಿಶ್ರ ಮಾಡಿ. ಇದನ್ನು ಸ್ವಲ್ಪ ಸ್ವಲ್ಪವೇ ತೆಗೆದುಕೊಂಡು ಸಣ್ಣ ಸಣ್ಣ ಉಂಡೆಗಳನ್ನು ಮಾಡಿದರೆ ಅರೋಗ್ಯಕರವಾದ ಲಡ್ಡು ಸವಿಯಲು ಸಿದ್ದ.