image image
ಬ್ರೇಕಿಂಗ್ ನ್ಯೂಸ್
ಬ್ರೇಕಿಂಗ್ ನ್ಯೂಸ್
ಅಡುಗೆ

ಒಂದೆಲಗ ಅಥವಾ ತಿಮರೆ ಚಟ್ನಿ

ಒಂದೆಲಗ ಅಥವಾ ತಿಮರೆ ಚಟ್ನಿ

ಬೇಕಾಗುವ ಸಾಮಾಗ್ರಿಗಳು

1ಕಪ್ -ಒಂದೆಲಗ ಸೊಪ್ಪು (ಬೇರು ಸಮೇತ ಇದ್ದರೆ ಆರೋಗ್ಯಕ್ಕೆ ಇನ್ನಷ್ಟು ಒಳ್ಳೆಯದು)

1ಕಪ್- ತೆಂಗಿನ ತುರಿ  

ರುಚಿಗೆ ತಕ್ಕಷ್ಟು ಉಪ್ಪು 

ಸ್ವಲ್ಪ ಹುಣಸೆ ಹುಳಿ

3-4  ಹಸಿ ಮೆಣಸಿನಕಾಯಿ 

ಎಣ್ಣೆ-ಒಗ್ಗರಣೆಗೆ

ಉದ್ದಿನಬೇಳೆ

ಕರಿಬೇವಿನ ಸೊಪ್ಪು

ಸಾಸಿವೆ ಒಗ್ಗರಣೆಗೆ ಬೇಕಾಗುವಷ್ಟು. 

ತಯಾರಿಸುವ ವಿಧಾನ 

ಬೇರು ಸಮೇತ ಒಂದೆಲಗ ಸೊಪ್ಪನ್ನು ಚೆನ್ನಾಗಿ ತೊಳೆದುಕೊಂಡು, ಅದಕ್ಕೆ ತೆಂಗಿನ ತುರಿ, ಉಪ್ಪು, ಹುಣಸೆ ಹುಳಿ, ಹಸಿಮೆಣಸಿನಕಾಯಿ ಸ್ವಲ್ಪ ನೀರು ಸೇರಿಸಿ ಗಟ್ಟಿಯಾಗಿ ರುಬ್ಬಿಕೊಂಡು ಮಿಶ್ರಣವನ್ನು ಇನ್ನೊಂದು ಪಾತ್ರೆಗೆ ಹಾಕಿಕೊಂಡು ಒಗ್ಗರಣೆ ಮಾಡಿದರೆ ಸುಲಭವಾಗಿ, ರುಚಿಯೊಂದಿಗೆ ಅರೋಗ್ಯಕರವಾದ ತಿಮರೆ ಚಟ್ನಿ ಸವಿಯಲು ಸಿದ್ದ.

Category
ಕರಾವಳಿ ತರಂಗಿಣಿ