ಬೇಕಾಗುವ ಸಾಮಾಗ್ರಿಗಳು
ಗಸಗಸೆ – 5 ಚಮಚ, ಬೆಲ್ಲ – 1ಕಪ್, ಗೋಡಂಬಿ- 5-10, ದ್ರಾಕ್ಷಿ- 5-10, ನೀರು – 1/2 ಲೋಟ, ಹಾಲು- 1 ಲೋಟ ಗಟ್ಟಿ ಹಾಲು, ತೆಂಗಿನತುರಿ - 1 ಕಪ್, ಏಲಕ್ಕಿ - 2
ಮಾಡುವ ವಿಧಾನ
ಒಂದು ಬಾಣಲೆಯಲ್ಲಿ ಗಸಗಸೆಯನ್ನು ಎಣ್ಣೆ ಹಾಕದೆ ಹೊಂಬಣ್ಣ ಬರುವವರೆಗೆ ಹುರಿದು, ತಣ್ಣಗಾಗಿಸಬೇಕು ಈ ನಡುವೆಯೇ ಬಿಸಿಯಾದ ಪಾತ್ರೆಯಲ್ಲಿ ಬೆಲ್ಲವನ್ನು ಹಾಕಿ, ಇದಕ್ಕೆ ಕಾಲು ಗ್ಲಾಸ್ ನೀರನ್ನು ಸೇರಿಸಿ ಚೆನ್ನಾಗಿ ಕದಡಿ ಬೆಲ್ಲವನ್ನು ಸಂಪೂರ್ಣವಾಗಿ ಕರಗಿಸಿಕೊಳ್ಳಬೇಕು, ನಂತರ ಗಸಗಸೆ, ತೆಂಗಿನ ತುರಿ ಮತ್ತು ಏಲಕ್ಕಿಯನ್ನು ಸೇರಿಸಿ ಮಿಕ್ಸಿಯಲ್ಲಿ ಹಾಕಿ ರುಬ್ಬಿಕೊಳ್ಳಬೇಕು. ಇದು ಮೃದುವಾದ ಪೇಸ್ಟ್ ನಂತೆ ಆಗಲು ಕಾಲು ಕಪ್ ನೀರನ್ನು ಸೇರಿಸಿಕೊಳ್ಳಬೇಕು. ಬೆಲ್ಲ ಕರಗಿದ ಮೇಲೆ ರುಬ್ಬಿಕೊಂಡ ಗಸಗಸೆ ಪೇಸ್ಟ್ ನ್ನು ಸೇರಿಸಿ. 5 ನಿಮಿಷಗಳ ಕಾಲ ಚೆನ್ನಾಗಿ ಕುದಿಸಬೇಕು. ಈಗ ಇದಕ್ಕೆ ಗಟ್ಟಿ ಹಾಲು ಮತ್ತು ಕರಿದ ಗೋಡಂಬಿ ದ್ರಾಕ್ಷಿಯನ್ನು ಸೇರಿಸಿ, ತಳ ಹಿಡಿಯದಂತೆ ಆಗಾಗ ಕೈಯಾಡಿಸುತ್ತಾ ಚೆನ್ನಾಗಿ ಕುದಿಸಿದರೆ ಬಿಸಿ ಬಿಸಿಯಾದ, ರುಚಿಕರವಾದ ಮತ್ತು ಆರೋಗ್ಯಕರವಾದ ಗಸಗಸೆ ಪಾಯಸ ಸವಿಯಲು ಸಿದ್ದ.