ಬೇಕಾಗುವ ಸಾಮಗ್ರಿಗಳು:
ಕಡಲೆ ಹಿಟ್ಟು – 1 ಕಪ್
ಪುಡಿ ಸಕ್ಕರೆ – ಅರ್ಧ ಕಪ್
ತುಪ್ಪ – ಅರ್ಧ ಕಪ್
ಗೋಡಂಬಿ-ಅರ್ಧ ಕಪ್
ಏಲಕ್ಕಿ ಪುಡಿ – ಅರ್ಧ ಚಮಚ
ಮಾಡುವ ವಿಧಾನ:
ಮೊದಲು ಕಡಲೆ ಹಿಟ್ಟನ್ನು ಹುರಿದುಕೊಂಡು ಪಕ್ಕದಲ್ಲಿಡಿ. ನಂತರ ಪಾತ್ರೆಯಲ್ಲಿ ಒಂದು ಚಮಚದಷ್ಟು ತುಪ್ಪದಲ್ಲಿ ಕತ್ತರಿಸಿದ ಗೇರುಬೀಜವನ್ನು ಹಾಕಿ ಹುರಿದುಕೊಳ್ಳಬೇಕು ಈಗ ಪಾತ್ರೆಯಲ್ಲಿ ತುಪ್ಪವನ್ನು ಹಾಕಿ ಬಿಸಿ ಮಾಡಿಕೊಂಡು ಹುರಿದ ಕಡಲೆ ಹಿಟ್ಟನ್ನು ಹಾಕಿ ಚೆನ್ನಾಗಿ ಹುರಿಯಬೇಕು. ಇದಕ್ಕೆ ಏಲಕ್ಕಿ ಪುಡಿ ಸೇರಿಸಿ ಮಿಶ್ರ ಮಾಡಿಕೊಂಡು, ಗ್ಯಾಸ್ ಆರಿಸಿ ಈ ಮಿಶ್ರಣಕ್ಕೆ ಸಕ್ಕರೆ ಪುಡಿ, ಗೋಡಂಬಿ, ತುಪ್ಪವನ್ನು ಹಾಕಿ ಚೆನ್ನಾಗಿ ಮಿಶ್ರ ಮಾಡಿಕೊಂಡು ಬಳಿಕ ಇದನ್ನು ಒಂದು ಪಾತ್ರೆಗೆ ವರ್ಗಾಯಿಸಿ, ಕೈಗಳಿಗೆ ಸ್ವಲ್ಪ ತುಪ್ಪ ಹಚ್ಚಿಕೊಂಡು ಹಿಟ್ಟಿನಿಂದ ಲಾಡಿನ ಉಂಡೆಗಳನ್ನು ಕಟ್ಟಲು ಪ್ರಾರಂಭಿಸಿದರೆ ರುಚಿಯಾದ ಬೇಸನ್ ಲಾಡು ಸವಿಯಲು ಸಿದ್ಧವಾಗುತ್ತದೆ.
✍ಲಲಿತಶ್ರೀ ಪ್ರೀತಂ ರೈ