image image
ಬ್ರೇಕಿಂಗ್ ನ್ಯೂಸ್
ಬ್ರೇಕಿಂಗ್ ನ್ಯೂಸ್
ಅಡುಗೆ

ಬಾಯಿಯಲ್ಲಿ ನೀರೂರಿಸುವ ಅವಲಕ್ಕಿ ಪಾಯಸ

ಬಾಯಿಯಲ್ಲಿ ನೀರೂರಿಸುವ ಅವಲಕ್ಕಿ ಪಾಯಸ

ಬೇಕಾಗುವ ಪದಾರ್ಥಗಳು:

ಗಟ್ಟಿ ಅವಲಕ್ಕಿ-1/2 ಕಪ್,

1/2 ಕಪ್ ಸಕ್ಕರೆ,

2 ಕಪ್ ಹಾಲು,

1 ಚಮಚ ತುಪ್ಪ,

7-8 ದ್ರಾಕ್ಷಿ,

ಗೊಡಂಬಿ,

ಸ್ವಲ್ಪ ಏಲಕ್ಕಿ ಪುಡಿ

ಮಾಡುವ ವಿಧಾನ:

ಮೊದಲಿಗೆ ಗಟ್ಟಿ ಅವಲಕ್ಕಿಯನ್ನು ತೊಳೆದು ನೀರು ಬಗ್ಗಿಸಿ ಪಕ್ಕಕ್ಕಿಡಬೇಕು. ಈಗ ಒಂದು ಬಾಣಲೆಯಲ್ಲಿ ತುಪ್ಪ ಬಿಸಿಮಾಡಿ, ಗೋಡಂಬಿ ಮತ್ತು ದ್ರಾಕ್ಷಿ ಹುರಿದು ಎತ್ತಿಟ್ಟುಕೊಳ್ಳಬೇಕು. ನಂತರ ಅದೇ ಬಾಣಲೆಗೆ ಹಾಲು ಮತ್ತು ಸಕ್ಕರೆಯನ್ನು ಹಾಕಿ ಕುದಿಯಲು ಪ್ರಾರಂಭವಾದ ಕೂಡಲೇ ತೊಳೆದಿಟ್ಟ ಅವಲಕ್ಕಿ ಹಾಕಿ ಆಗಾಗ ಮಗುಚುತ್ತಾ ಕುದಿಸಬೇಕು. ಅವಲಕ್ಕಿ ಮೆತ್ತಗೆ ಬೇಯುವವರೆಗೆ ಮಧ್ಯಮ ಉರಿಯಲ್ಲಿ ಕುದಿಸಿ. ದ್ರಾಕ್ಷಿ, ಗೋಡಂಬಿ ಮತ್ತು ಏಲಕ್ಕಿ ಪುಡಿಯನ್ನು ಸೇರಿಸಿದರೆ ಶ್ರೀ ಕೃಷ್ಣನಿಗೆ ಇಷ್ಟವಾದ ರುಚಿಕರವಾದ ಅವಲಕ್ಕಿ ಪಾಯಸ ಸವಿಯಲು ಸಿದ್ದ.

Category
ಕರಾವಳಿ ತರಂಗಿಣಿ