ಬೇಕಾಗುವ ಪದಾರ್ಥಗಳು:
ಉಪ್ಪಿಟ್ಟು ರವೆ-1/2 ಕಪ್
ನೀರು-2 ಕಪ್
ಅವರೇಕಾಳು-1/2 ಕಪ್
ಸಾಸಿವೆ- 1/2 ಚಮಚ
ಉದ್ದಿನಬೇಳೆ-1 ಚಮಚ
ಕಡ್ಲೆಬೇಳೆ-1 ಚಮಚ
ಈರುಳ್ಳಿ-1
ಟೊಮ್ಯಾಟೋ-1
ಹಸಿಮೆಣಸಿನಕಾಯಿ-3
ಕರಿ ಬೇವಿನ ಎಲೆ-4-5
ಸಣ್ಣಗೆ ಹೆಚ್ಚಿದಶುಂಠಿ-1ಚಮಚ
ಅರಶಿನ ಪುಡಿ-ಸ್ವಲ್ಪ
ಅಡುಗೆ ಎಣ್ಣೆ-4 ಚಮಚ
ಉಪ್ಪು -ರುಚಿಗೆ ತಕ್ಕಷ್ಟು
ಕೊತ್ತಂಬರಿ ಸೊಪ್ಪು-ಸ್ವಲ್ಪ
ತೆಂಗಿನತುರಿ-1 /2ಕಪ್
ಮಾಡುವ ವಿಧಾನ:
ಮೊದಲಿಗೆ ಅವರೆಕಾಳನ್ನು ಸುಲಿದು, ಸ್ವಲ್ಪ ಉಪ್ಪು ಸೇರಿಸಿ ಬೇಯಿಸಿಟ್ಟುಕೊಳ್ಳಬೇಕು, ನಂತರ ರವೆಯನ್ನು ಸ್ವಲ್ಪ ಎಣ್ಣೆಯೊಂದಿಗೆ ಹುರಿದಿಟ್ಟುಕೊಂಡು, ಅದೇ ಬಾಣಲೆಗೆ ಎಣ್ಣೆ,ಸಾಸಿವೆ, ಉದ್ದಿನಬೇಳೆ ಮತ್ತು ಕಡ್ಲೆಬೇಳೆ ಹಾಕಿ. ಸಾಸಿವೆ ಸಿಡಿದ ಕೂಡಲೇ ಕರಿಬೇವು, ಕತ್ತರಿಸಿದ ಶುಂಠಿ, ಕತ್ತರಿಸಿದ ಈರುಳ್ಳಿ ಮತ್ತು ಹಸಿರು ಮೆಣಸಿನಕಾಯಿ ಸೇರಿಸಿ. ಮಧ್ಯಮ ಉರಿಯಲ್ಲಿ ಹುರಿಯಬೇಕು. ಆಮೇಲೆ ಟೊಮ್ಯಾಟೋ ಹಾಕಿ. ಉಪ್ಪು ಮತ್ತು ಅರಶಿನ ಪುಡಿ ಸೇರಿಸಿ. ಟೊಮ್ಯಾಟೋ ಮೆತ್ತಗಾಗುವವರೆಗೆ ಹುರಿದುಕೊಂಡು, ಅದಕ್ಕೆ ಬೇಯಿಸಿದ ಅವರೆಕಾಳನ್ನು ಸೇರಿಸಿ ನಂತರ ನೀರು ಹಾಕಿ, ನೀರು ಕುದಿಯಲು ಪ್ರಾರಂಭವಾದ ನಂತರ ಹುರಿದಿಟ್ಟ ರವೆಯನ್ನು ನಿಧಾನವಾಗಿ ಹಾಕುತ್ತಾ ಮಗುಚಿ, ಸ್ವಲ್ಪ ಗಟ್ಟಿಯಾದ ಮೇಲೆ ಮುಚ್ಚಳ ಮುಚ್ಚಿ ಸಣ್ಣ ಉರಿಯಲ್ಲಿ ಒಂದೆರಡು ನಿಮಿಷ ಬೇಯಿಸಬೇಕು. ನಂತರ ತೆಂಗಿನತುರಿ, ಕೊತ್ತಂಬರಿ ಸೊಪ್ಪು ಸೇರಿಸಿ ಮತ್ತೊಮ್ಮೆ ಚೆನ್ನಾಗಿ ಮಗುಚಿದರೆ ರುಚಿಕರವಾದ ಅವರೆಕಾಳು ಉಪ್ಪಿಟ್ಟು ಸವಿಯಲು ಸಿದ್ದ.
✍ ಲಲಿತಶ್ರೀ ಪ್ರೀತಂ ರೈ