ಬೇಕಾಗುವ ಸಾಮಾಗ್ರಿಗಳು:
ಮೈದಾ ಹಿಟ್ಟು -1ಕಪ್, ಅಕ್ಕಿ ಹಿಟ್ಟು-ಅರ್ದ ಕಪ್, ಮೊಸರು- 1 ಕಪ್, ಸಕ್ಕರೆ -1ಚಮಚ, ಉಪ್ಪು- ರುಚಿಗೆ ತಕ್ಕಷ್ಟು, ಜೀರಿಗೆ-1 ಚಮಚ,ಶುಂಟಿ ತುರಿದು- 1ಚಮಚ, ಕರಿಬೇವು-5 ಎಲೆ, ಕೊತ್ತಂವರಿ ಸೊಪ್ಪು-ಸ್ವಲ್ಪ, ಹಸಿ ಮೆಣಸಿನಕಾಯಿ- 2, ಅಡುಗೆ ಸೋಡ-1ಚಿಕ್ಕ ಚಮಚ, ನೀರು- ಸ್ವಲ್ಪ
ಮಾಡುವ ವಿಧಾನ:-
ಮೊದಲಿಗೆ ಒಂದು ಪಾತ್ರೆಗೆ ಮೈದಾ ಹಿಟ್ಟು, ಸಕ್ಕರೆ, ಉಪ್ಪು, ಜೀರಿಗೆ, ತುರಿದ ಶುಂಠಿ, ಕರಿಬೇವು, ಕೊತ್ತಂಬರಿ ಸೊಪ್ಪು, ಸಣ್ಣದಾಗಿ ಕತ್ತರಿಸಿದ ಮಾಡಿದ ಹಸಿಮೆಣಸಿನಕಾಯಿ, ಅಡುಗೆ ಸೋಡಾ, ಅಕ್ಕಿ ಹಿಟ್ಟು, ಮೊಸರನ್ನು ಸೇರಿಸಿ ಅದಕ್ಕೆ ಸ್ವಲ್ಪ ನೀರನ್ನು ಸೇರಿಸಿ ಬೋಂಡ ಹಿಟ್ಟಿನ ಹದಕ್ಕೆ ಕಲಸಿಕೊಳ್ಳಿ.
ನಂತರ ಬಾಣಲೆಯಲ್ಲಿ ಎಣ್ಣೆ ಕಾಯಲು ಇಡಬೇಕು, ಎಣ್ಣೆ ಕಾದ ಮೇಲೆ ಕಲಸಿದ ಮಿಶ್ರಣವನ್ನು ಮದ್ಯಮ ಗಾತ್ರದ ಉಂಡೆಯಾಕಾರದ ಗೋಲಿ ಮಾಡಿ ಎಣ್ಣೆಯಲ್ಲಿ ಹಾಕಿ ಹೊಂಬಣ್ಣಕ್ಕೆ ಬರುವವರೆಗೂ ಕರಿದು ತೆಗೆದರೆ ಬಿಸಿಬಿಸಿಯಾದ ಗೋಲಿಬಜೆ ಅಥವಾ ಮಂಗಳೂರು ಬೋಂಡ ಸವಿಯಲು ಸಿದ್ದ.